ಬೆಂಗಳೂರು – ಪಂಚಮಸಾಲಿ ಹರಿಹರದಲ್ಲಿನ ಸಂಘದ ಭಿನ್ನಾಭಿಪ್ರಾಯ ಶಮನಕ್ಕಾಗಿ ಸೆಪ್ಟೆಂಬರ್ 28 ರಂದು ಬೆಳಿಗ್ಗೆ 10 ಗಂಟೆಗೆ ಕೂಡಲ ಸಂಗಮದಲ್ಲಿ ಪಂಚಮಸಾಲಿ ಬಾಂಧವರ ಮಹಾಸಭೆ ಕರೆಯಲಾಗಿದೆ ಎಂದು ಪಂಚಮಸಾಲಿ ಪೀಠದ ಮೃತ್ಯುಂಜಯ ಸ್ವಾಮಿಗಳು ತಿಳಿಸಿದರು

1992ರಲ್ಲಿ ಸಂಘ ಸ್ಥಾಪನೆಯಾಗಿತ್ತು. ಸಂಘಟನೆ ಹೆಸರಿನಲ್ಲಿ ರಾಜ್ಯಾದ್ಯಂತ ಸಮಾಜದ ಗಣ್ಯರು, ರಾಜಕೀಯ ಮುಖಂಡರು, ಲಕ್ಷಾಂತರ ಕಾರ್ಯಕರ್ತರು ಎಲ್ಲಾ ರೀತಿಯ ಸಹಕಾರ ನೀಡಿದ್ದರು. ಆದರೆ ಇತ್ತೀಚೆಗೆ ಸಂಘದಲ್ಲಿನ ಪಾರದರ್ಶಕತೆ ಪ್ರಶ್ನಿಸಿ ಕೆಲ ನಿಷ್ಠಾವಂತ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಾರಣ ನ್ಯಾಯಾಲಯ ಪ್ರಸ್ತುತ ವಿಸರ್ಜನೆಗೊಂಡಿದ್ದು, ಸಮಾಜದ ಗಣ್ಯರಿಗೆ ಹಾಗೂ ಪೂಜ್ಯರಿಗೆ ನಿರಾಸೆ ಉಂಟಾಗಿದೆ.

 

ಸಮಾಜಕ್ಕೆ ಸ್ಪಷ್ಟ ನಿರ್ದೇಶನ ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಇಂತಹ ಕಹಿ ಘಟನೆಗಳು ನಡೆಯದಂತೆ ಸಮಾಜವನ್ನು ಕಟ್ಟಲು ಮುಖಂಡರಲ್ಲಿನ ಭಿನ್ನಾಭಿಪ್ರಾಯ ಶಮನಕ್ಕಾಗಿ ಸಭೆ ಕರೆಯಲಾಗಿದೆ. ಕಾರಣ ಸಮಾಜದ ರಾಜಕಾರಣಿಗಳು, ಜಿಲ್ಲೆ ಮತ್ತು ತಾಲೂಕು ಅಧ್ಯಕ್ಷರು, ಪ್ರಜ್ಞಾವಂತರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಮಾಜದ ಎಲ್ಲಾ ಬಾಂಧವರು ಸಭೆಗೆ ಆಗಮಿಸಿ ಸೂಕ್ತ ಸಲಹೆ, ಸೂಚನೆ ನೀಡಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಜಿ.ಬಿ. ಪಾಟೀಲ್ ಉಪಸ್ಥಿತರಿದ್ದರು.

Advertisements