press 2

ಕನ್ನಡ ಮತ್ತು ಇಂಗ್ಲೀಷ್ ಕಾವ್ಯ ಬರೆವ ಕಲಾಶಾಲೆಯೊಂದು ನಗರದಲ್ಲಿ ಇಂದು ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬಂದಿತು.  ರಾಜ್ಯ ವಿಧಾನಪರಿಷತ್ ಸಭಾಪತಿ ಡಾ.ಶಂಕರಮೂತರ್ಿಯವರು ಈ ಶಾಲೆಯ ನ್ನು ಉದ್ಘಾಟಿಸಿದರು. ನರ್ಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ಹೊಲ್ದಾಕಿದ್ರೂ ಮೂಗ್ನಲ್ಲಾದ್ರೂಕನ್ನಡ್ ಪದ್ಗೋಳ್ಹಾಡ್ತೀನಿ ನನ್ಮನ್ಸ್ ನೀ ಕಾಣೆ ಎಂಬ ತಮ್ಮ ಗುರುಗಳಾದ ಜಿ.ಪಿ. ರಾಜ್ರತ್ನಮ್ ಅವರ ಕವನವನ್ನು ನೆನೆಪು ಮಾಡಿಕೊಂಡ ಡಾ.ಶಂಕರಮೂರ್ತಿಯವರುಇಂದು ಕನ್ನಡಕ್ಕೆ ಇಂಥ ಆತಂಕದ ಪರಿಸ್ಥಿತಿಯೇನೂ ಇಲ್ಲ. ಕನ್ನಡ ಉಳಿಸಿ ಬೆಳೆಸಲು ಸಾಕಷ್ಟು ಜಾಗೃತಿ ಮೂಡಿದೆ ಎಂದರು.

ಕಾವ್ಯವನ್ನು ಬರೆವ ಕಲೆಯನ್ನು ಕಲಿಸಲೆಂದೇ ಶಾಲೆಯೊಂದು ಆರಂಭಿಸಿರುವದು ಸ್ತುತ್ಯರ್ಹ ಪ್ರಯತ್ನ ಎಂದು ಪ್ರಶಂಸಿಸಿದರು.

ಡಾ.ಪಿ.ವಿ. ನಾರಾಯಣ್ ಆಶಯ ನುಡಿಗಳನ್ನಾಡಿದರು. ಡಾ.ಜಿ.ಎಸ್.ಸಿದ್ದಲಿಂಗಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಂಶುಪಾಲ ಡಾ. ಮೊಹ್ಮದ್ಫಕ್ರುದ್ದೀನ್ ಶಾಲೆಯಲ್ಲಿ ಕನ್ನಡ ಕಾವ್ಯ ಬರೆವುದನ್ನು ಕಲಿಸುವ ಜಾನಪದ ಜಂಗಮ ಡಾ.ದೊಡ್ಡರಂಗೇಗೌಡರೂ ಉಪಸ್ಥಿತರಿದ್ದರು.

Advertisements