1576072cd49ad35b04673412d4b24d64
26-ಜುಲೈ-2016, ಬೆಂಗಳೂರು: ಟ್ಯಾಕ್ವಂಡೋ ರಾಜ್ಯ ಮಟ್ಟದ ಸಬ್ ಜೂನಿಯರ್ , ಜೂನಿಯರ್ , ಸೀನಿಯರ್ ಮತ್ತು ಕೆಡೆಟ್ ಟ್ಯಾಕ್ವಂಡೋ ಚಾಂಪಿಯನ್ಶಿಪ್ – 2016 ರಲ್ಲಿ ಯಶಸ್ ಪವರ್ ಟ್ಯಾಕ್ವಂಡೋ ತರಬೇತಿ ಕೇಂದ್ರದ  ಮಕ್ಕಳು  ವಿವಿಧ ಅಂತಗಳಲ್ಲಿ ಪದಕಗಳನ್ನು ಗೆದ್ದು ಬೆಂಗಳೂರು ನಗರಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ.
ಪ್ರಪಂಚದ ಅತ್ಯಂತ ಹಳೆಯ ಸಮರ ಕಲೆಗಳಲ್ಲಿ ಒಂದಾದ ಟೇಕ್‍ವಂಡೋ ಆತ್ಮ ರಕ್ಷಣೆ ಸಮರಕಲೆಯು ಕೋರಿಯಾ ದೇಶದಲ್ಲಿ ಹುಟ್ಟಿಕೊಂಡಿದ್ದು ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಬಹಳ ವರ್ಷಗಳಿಂದ ಭಾರತ ದೇಶದಲ್ಲಿಯೂ ಸಹ ಟೇಕೊಂಡೋ ಸಮರ ಕಲೆಯು ಪ್ರಸಿದ್ದಿ ಪಡೆದ್ದಿದ್ದು ನಮ್ಮ ಯುವಜನಾಂಗವು ಸಹ ಹೆಚ್ಚು ಆಕರ್ಷಿತರಾಗಿದ್ದಾರೆ.
ಯಶಸ್ ಪವರ್ ಟೇಕ್ವಾಂಡೋ ತರಬೇತಿ ಕೇಂದ್ರದವರು ದಶಕಗಳಿಂದ ಬೆಂಗಳೂರಿನ ಮಕ್ಕಳಿಗೆ ಟೇಕ್ವಾಂಡೋ ಸಮರಕಲೆಯನ್ನು ಕಲಿಸುತ್ತ ಬಂದಿದ್ದು, ಇಲ್ಲಿ ತರಬೇತಿ ಪಡೆದಂತಹ ವಿಧ್ಯಾರ್ಥಿಗಳು ರಾಜ್ಯ ಮಟ್ಟದ ಚಾಂಪಿಯನ್ ಶಿಪ್‍ಗಳಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಪಡೆಯುತ್ತ ಬಂದಿದ್ದಾರೆ, ಆಗೆಯೇ 21-07-2016 ರಂದು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ನಡೆದ 34ನೇ ರಾಜ್ಯಮಟ್ಟದ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಮತ್ತು ಕೆಡೆಟ್ ಟೇಕ್ವೊಂಡೋ ಚಾಂಫಿಯನ್ ಷಿಫ್ -2016 ರಲ್ಲಿ ಯಶಸ್ ಟೇಕ್ವಾಂಡೊ ತರಬೇತಿ ಕೇಂದ್ರ (ರಿ) ವತಿಯಿಂದ ಭಾಗವಹಿಸಿದ ವಿಧ್ಯಾರ್ಥಿಗಳು ವಿವಿಧ ಹಂತಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚು ಪದಕಗಳನ್ನು ಗೆದ್ದು ಬೆಂಗಳೂರಿಗೆ ಕೀರ್ತಿ ತಂದುಕೊಟ್ಟಿರುವುದು ಹೆಮ್ಮೆಯ ವಿಚಾರ.
IMG-20160726-WA0013
IMG-20160726-WA0016

ರಾಜ್ಯಮಟ್ಟದ ಚಾಂಪಿಯನ್‍ಶಿಪ್‍ನಲ್ಲಿ ಪದಕ ಗೆದ್ದು ನಮ್ಮ ಬೆಂಗಳೂರಿಗೆ ಕೀರ್ತಿ ತಂದು ಕೊಟ್ಟ ಮಕ್ಕಳು.

1. ಸುಷ್ಮಾ.ಜಿ – ಚಿನ್ನದ ಪದಕ

2. ಪೂಜಾ. ಎ. – ಚಿನ್ನದ ಪದಕ

3. ಸಂಧ್ಯಾ. ಎಂ – ಬೆಳ್ಳಿಯ ಪದಕ

4. ಮಾಯಾವತಿ.ಎನ್. – ಬೆಳ್ಳಿಯ ಪದಕ

5. ಮಿಲನ.ಎಸ್ – ಕಂಚಿನ ಪದಕ

6. ಅಭಿಲಾಮ್.ಡಿ.ಬಿ. – ಬೆಳ್ಳಿಯ ಪದಕ

7. ಲಿಖಿತ್.ಆರ್. – ಬೆಳ್ಳಿಯ ಪದಕ

8. ಲಿಖಿತ್.ಜಿ – ಕಂಚಿನ ಪದಕ

9. ಅಜಯ್.ಎ – ಕಂಚಿನ ಪದಕ

Advertisements