ಬೆಂಗಳೂರು:‘ಕಟ್ಟ ಕೆಲಸ ಮಾಡಿ ಕೆಟ್ಟವರು ಎನಿಸಿಕೊಳ್ಳವುದು ಸಲಭ ಆದರೆ ಸಾಧನೆ ಮಾಡಿ ಸಮಾಜದಲ್ಲಿ ಗುರುತಿಸಿಕೊಳ್ಳಲು ದಶಕಳೇ ಬೇಕಾಗುತ್ತದೆ ಆದರಿಂದ ಹೆಚ್ಚು ಓದಿದರೆ ಸಮಾಜದಲ್ಲಿ ಹೊಸ ಆವಿಶ್ಕಾರ ಮಾಡಲು ಸಹಕಾರಿಯಾಗುತ್ತದೆ’ ಎಂದು ಉದ್ಯಮ ಸಲಹೆಗಾರ ಹಾಗೂ ಯಶಸ್ವಿ ಉದ್ಯಮಿ ಸಂಸ್ಥಾಪಕ ಶಿವಾಖೇರಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

IMG_7259

ನಗರದ ಕೆ.ಆರ್.ಪುರಂ ಗಾರ್ಡನ್ ಸಿಟಿ ವಿಶ್ವವಿದ್ಯಾಲಯ ಹಾಗೂ ಶಿವಾಖೇರಾ ಇನ್ಸ್ಟಿಟ್ಯೂಟ್ ನಾಯಕತ್ಬ ಹಾಗೂ ನಿರ್ವಹಣೆ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಂಬಿಎ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿಗಳಿಗೆ ನಾಯಕತ್ವ ವಹಿಸಲಾಗದ ಮ್ಯಾನೇಜರ್‍ಗಳ ಬದಲಿಗೆ ಮ್ಯಾನೇಜ್ ಮಾಡಬಲ್ಲ ನಾಯಕರನ್ನು ಸೃಷ್ಟಿಸು’ ವಿಷಯದ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸಾಧಕರು ಯಾವುದೇ ಹೊಸ ಆವಿಶ್ಕರಗಳನ್ನು ಮಾಡುವುದಿಲ್ಲ ಬದಲಾಗಿ ಆವಿಶ್ಕಾರವನ್ನೇ ಬೇರೆ ರೀತಿ ಮಾಡುತ್ತಾರೆ. ನಿಮ್ಮ ವರ್ತನೆ ನಿಮ್ಮ ಯಶಸ್ಸಿಗೆ ಪ್ರಭಲ ಕಾರಣವಾಗುತ್ತದೆ. ನಕಾರಾತ್ಮಕ ಧೋರಣೆ ಮೇಲೆ ಮನವೊಲಿಸುವ ವಿವರಣೆ ಜತೆಗೆ ನಿಮ್ಮ ವರ್ತನೆ ನಿರ್ಧರಿಸುವ ಅಂಶಗಳನ್ನು ವಿಚರಿಸುತ್ತವೆ ಎಂದು ಕಿವಿ ಮಾತು ಹೇಳಿದರು.

ಅನುಭವ ಸಾಕಷ್ಟು ವಿಚಾರಗಳನ್ನು ಕಲಿಸುತ್ತವೆ. ಈಗಿನ ಕೆಂಪನಿ ಅಥವಾ ಕಾರ್ಪೂರೇಟ್ ಸೆಕ್ಟಾರ್‍ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಶ್ರದ್ದೆಯಿಂದ ಮಾಡುವುದಿಲ್ಲ. ಮೊಬೈಲ್ ಹಾಗೂ ಸಾಮಾಜಿಕ ಜಲತಾಣಗಳಲ್ಲಿ ಹೆಚ್ಚು ಕೊಡುತ್ತಾರೆ ಎಂದು ಹೇಳಿದರು.

ಪುಸ್ತಕಗಳು ಹೆಚ್ಚು ಅನುಭವ ಕಲಿಸಿಕೊಟುತ್ತವೆ. ನಾನು ಸಹ ಪುಸ್ತಕಗಳ ಓದಿ ಅಂದಿನಿಂದ ಆತ್ಮಾಭಿಮಾನ ಹೆಚ್ಚುಸುವ ಕಾರ್ಯಕ್ರಮಗಳನ್ನು ಕೈಗೊಂಡೆ. ಅಷ್ಟಾದರೂ ನನ್ನನ್ನು ನಾನು ಶಕ್ತಿಶಲಿ ಎಂದು ಗುರುತಿಸಿಕೊಳ್ಳಲು ಸುಮಾರು 17 ವರ್ಷಗಳು ಕಳೆಯಿತು ಎಂದು ತಮ್ಮ ಜೀವನದ ಗೆಲುವಿನ ಹಾದಿ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ರಿಪಬ್ಲಿಕ್ ಮಾಲ್ಡೀವ್ ರಾಯಭಾರಿ ಹಾಗೂ ಕಾಲೇಜಿನ ಅಧ್ಯಕ್ಷ ಡಾ.ವಿ.ಜಿ. ಜೋಸೆಫ್ ಮಾತನಾಡಿ, ‘ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲಲು ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಹಾಗೂ ಸಿಬ್ಬಂದಿಗಳ ಪ್ರೋತ್ಸಾಹದಿಂದ ನಮ್ಮ ಕಾಲೇಜಿನಲ್ಲಿ ಹಲವು ಕಾರ್ಯಕ್ರಮಗಳು ಆಯೋಜಿಸಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೇ, ಪಠ್ಯೇತರ ಚಟುವಟಿಕೆಗಳ್ಳು ಭಾಗವಹಿಸಬೇಕು. ಜತೆಗೆ ಯುವ ಮನಸ್ಸಿನ ಪರಿಸ್ಥಿತಿಗಳು ಕಾರ್ಯಾಗಳನ್ನು ರೂಪಿಸಿ ಅವರನ್ನು ಪ್ರೋತ್ಸಾಗಿಸುವುದು ಮುಖ್ಯ ಗುರಿ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಪ್ರಮಾಣಿಕತೆ, ನಿಷ್ಠೆ ಮತ್ತು ಉತ್ಸಾಹ ಹೊಂದಿದಾಗ ಮಾತ್ರ ಜೀವನ ಮತ್ತು ವೃತ್ತಿಯಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಕಾಲೇಜಿನ ಪ್ರಾಂಶುಪಾಲ ಸಿದ್ದರಾಮಯ್ಯ ಪೂಜಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಯನ ಒಂದು ನಿರಂತರ ಕಾರ್ಯ. ಅದು ಪ್ರತಿಯೊಬ್ಬ ಮನುಷ್ಯನ ಜೀವಿತಾವಧಿಯವರೆಗೂ ನಡೆಯುವಂಥದ್ದು. ಅದರಲ್ಲಿ ಯಶಸ್ಸು ಕಾಣಲು ನಿರಂತರ ಅಧ್ಯಯನ ಮಾಡುತ್ತಿರಬೇಕು. ಆ ನಿಟ್ಟಿನಲ್ಲಿ ಹಲವಾರು ಕಾರ್ಯಾಗಾರಗಳನ್ನು ಕಾಲೇಜಿನಲ್ಲಿ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸಿದ್ದರಾಮಯ್ಯ ಪೂಜಾರ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎಂ.ಮಂಜುನಾಥ್, ಉಪನ್ಯಾಸಕರಾರ ಸಿತ್ಮಾ ರೆಡ್ಡಿ, ಶ್ರೀಜಾ, ರೇವತಿ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು