`ಆರೋಗ್ಯದಲ್ಲಿನ ಅಸಮತೋಲನ’ದ ಬಗ್ಗೆ ಬೆಳಕು ಚೆಲ್ಲಲಿರುವ ಸಂಶೋಧಕರು, ವೈದ್ಯರು ಮತ್ತು ನೀತಿ ನಿರೂಪಕರು

Photo 1 - Director of state Health and family welfare Dept Dr.Vimala Patil addressing the press conference

ಬೆಂಗಳೂರು: ನಗರದಲ್ಲಿ ನಡೆಯಲಿರುವ 3 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ 300 ಕ್ಕೂ ಹೆಚ್ಚು ಸಂಶೋಧಕರು, ವೈದ್ಯರು ಮತ್ತು ಕಾನೂನು ರೂಪಕರು ಪಾಲ್ಗೊಳ್ಳಲಿದ್ದು, ಸಾರ್ವಜನಿಕ ಆರೋಗ್ಯ ನೀತಿಯ ಸ್ಪಷ್ಟತೆ(ಬ್ರಿಂಗಿಂಗ್ ಎವಿಡೆನ್ಸ್ ಇನ್‍ಟು ಪಬ್ಲಿಕ್ ಹೆಲ್ತ್ ಪಾಲಿಸಿ) ಬಗ್ಗೆ ಚರ್ಚಿಸಲಿದ್ದಾರೆ. ರೆಸಿಡೆನ್ಸಿ ರಸ್ತೆಯಲ್ಲಿರುವ ಹೊಟೇಲ್ ಚಾನ್ಸರಿ ಪೆವಿಲಿಯನ್‍ನಲ್ಲಿ ಜುಲೈ 7 ರಿಂದ 9 ರವರೆಗೆ ನಡೆಯಲಿರುವ ಈ ಸಮ್ಮೇಳನದಲ್ಲಿ “ಈಕ್ವಿಟೆಬಲ್ ಇಂಡಿಯಾ: ಆಲ್ ಫಾರ್ ಹೆಲ್ತ್ ಅಂಡ್ ವೆಲ್‍ಬೀಯಿಂಗ್’’ ಎಂಬ ವಿಚಾರ ಈ ಸಮ್ಮೇಳನದ ಮೂಲ ಉದ್ದೇಶವಾಗಿದೆ.

ಬೆಂಗಳೂರಿನ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಮತ್ತು ಬೆಲ್ಜಿಯಂನ ಇನ್‍ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಡಿಸಿನ್ ಸಂಸ್ಥೆಗಳು ಈ ಸಮ್ಮೇಳನವನ್ನು ಜಂಟಿಯಾಗಿ ಆಯೋಜಿಸುತ್ತಿವೆ. ಇದಕ್ಕೆ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತ ಸರ್ಕಾರದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್, ನ್ಯಾಷನಲ್ ಹೆಲ್ತ್ ಸಿಸ್ಟಮ್ಸ್ ರಿಸೋರ್ಸ್ ಸೆಂಟರ್ ಮತ್ತು ಬೆಲ್ಜಿಯಾದ ಜಾಗತಿಕ ಆರೋಗ್ಯ ವೇದಿಕೆಯಾಗಿರುವ ಬಿಕಾಸ್ ಹೆಲ್ತ್ ಸಹಕಾರ ನೀಡುತ್ತಿವೆ.

ಈ ಸಮ್ಮೇಳನದ ಉದ್ಘಾಟನಾ ಸಮಾರಂಭ ಮೊದಲ ದಿನ ಸಂಜೆ 6 ರಿಂದ 8 ಗಂಟೆವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಜಿನೇವಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ನೀತಿ ವಿಭಾಗದ ಕಾರ್ಯಕಾರಿ ನಿರ್ದೇಶಕರಾದ ಡಾ.ಅಬ್ದುಲ್ ಘಫರ್, ದೆಹಲಿಯ ಎನ್‍ಎಚ್‍ಎಸ್‍ಆರ್‍ಸಿಯ ಡಾ. ಸಂಜಯ್‍ಕುಮಾರ್, ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್, ಬೆಲ್ಜಿಯಂನ ಇನ್‍ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಡಿಸಿನ್‍ನ ಪ್ರಾಧ್ಯಾಪಕರಾದ ಡಾ. ಬಾರ್ಟ್ ಕ್ರಿಯೆಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುತ್ತಾರೆ.

ಈ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿರುವ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‍ನ ನಿರ್ದೇಶಕ ಡಾ.ಎನ್.ದೇವದಾಸನ್ ಅವರು, “ಭಾರತದಲ್ಲಿನ ಆರೋಗ್ಯ ವ್ಯವಸ್ಥೆ ಮತ್ತು ಅದರ ನಿರಂತರ ಸುಧಾರಣೆಗಳ ಬಗ್ಗೆ ಇರುವ ವಾಸ್ತವ ಸನ್ನಿವೇಶಗಳು, ಲೋಪದೋಷಗಳ ಬಗ್ಗೆ ಚರ್ಚಿಸಲು ಸಂಶೋಧಕರು, ವೈದ್ಯರು ಮತ್ತು ಕಾನೂನು ರೂಪಕರಿಗೆ ಒಂದು ವೇದಿಕೆಯನ್ನು ರೂಪಿಸುವ ನಿಟ್ಟಿನಲ್ಲಿ 2010 ರಲ್ಲಿ ಇಂತಹ ಮೊದಲ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಇದೀಗ 3 ನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯುತ್ತಿದೆ’’ ಎಂದು ತಿಳಿಸಿದರು.

ಬೆಲ್ಜಿಯಂನ ಇನ್‍ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಡಿಸಿನ್‍ನ ಡಾ.ವಾರ್ನರ್ ಸೋರ್ಸ್ ಅವರು ಮಾತನಾಡಿ, “ಆರೋಗ್ಯ ಕ್ಷೇತ್ರ ಮತ್ತು ಈ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯಯೋಜನೆಗಳು ಯಾವ ರೀತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದರ ಮೇಲೆ ಈ ಸಮ್ಮೇಳನದಲ್ಲಿ ವಿಸ್ತøತ ಚರ್ಚೆ ನಡೆಸಲಾಗುತ್ತದೆ ಮತ್ತು ನೀತಿ ನಿರೂಪಣೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ’’ ಎಂದು ಹೇಳಿದರು.

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರಾದ ಡಾ. ವಿಮಲಾ ಪಾಟೀಲ್ ಮಾತನಾಡಿ, “ಕಳೆದ ಹಲವು ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ನಾವು ಸಾಕಷ್ಟು ಸುಧಾರಣೆಗಳನ್ನು ಕಾಣುತ್ತಿದ್ದೇವೆ. ಆರೋಗ್ಯ ತಾರತಮ್ಯದಂತಹ ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯದ ಸಮಾನತೆ ವಿಷಯದ ಮೇಲೆ ಈ ಸಮ್ಮೇಳನ ಆಯೋಜಿಸುತ್ತಿರುವುದು ಸಕಾಲಿಕವಾಗಿದೆ’’ ಎಂದು ಬಣ್ಣಿಸಿದರು.

ದೇಶದ 11 ರಾಜ್ಯಗಳ 57 ಕ್ಕೂ ಹೆಚ್ಚು ಸಂಶೋಧಕರು ಈ ಇಪಿಎಚ್‍ಪಿ ಸಮ್ಮೇಳನದಲ್ಲಿ ಪಾಲ್ಗೊಂಡು ನೀತಿ ನಿರೂಪಣೆ ಬಗ್ಗೆ ಪ್ರಾತ್ಯಕ್ಷಿಕೆ, ಸಂಶೋಧನಾ ವರದಿಗಳನ್ನು ಮಂಡಿಸಲಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ, ಇನ್‍ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಡಿಸಿನ್ ಸಂಸ್ಥೆಯ ಪ್ರತಿನಿಧಿಗಳು ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಹಿರಿಯ ಸರ್ಕಾರಿ ಅಧಿಕಾರಿಗಳು, ಹಲವು ರಾಜ್ಯಗಳು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕಾನೂನು ರೂಪಿಸುವ ತಜ್ಞರು ಸಹ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ಸಮ್ಮೇಳನದಲ್ಲಿ ಮಂಡನೆಯಾಗಲಿರುವ ಎಲ್ಲಾ ಸಮೀಕ್ಷೆ, ಸಂಶೋಧನೆಗಳ ಕುರಿತಾದ ವರದಿಗಳನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್ಸ್ ವಿಶೇಷ ಸಂಚಿಕೆಯನ್ನು ಹೊರತರುತ್ತಿದೆ. ಈ ಸಮ್ಮೇಳನದಲ್ಲೇ ಅದನ್ನು ಬಿಡುಗಡೆ ಮಾಡಲಿದ್ದು, ಸಾರ್ವಜನಿಕರಿಗೆ ಉಚಿತವಾಗಿ ಸಂಸ್ಥೆಯ ಡೋಮೇನ್‍ನಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡಾ.ಉಪೇಂದ್ರ ಭೋಜಾನಿ, ಸಹಾಯಕ ನಿರ್ದೇಶಕರು, ಐಪಿಎಚ್, ಬೆಂಗಳೂರು. upendra@iphindia.org ಅಥವಾ 93423 49121.

Advertisements