india-10841

ಬೆಂಗಳೂರು ಮೇ 2016: ಕ್ಲಿಕ್ಕ್ದ್ ಟು ಹೆಲ್ಪ್ “ಸ್ಪಿರಿಟ್ ಆಫ್ ಇಂಡಿಯಾ “ ಎನ್ನುವ ಛಾಯಾಚಿತ್ರ ಪ್ರದರ್ಶನವನ್ನು ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸುತ್ತಿದೆ. ವೈವಿಧ್ಯಮಯ ಭವ್ಯ ಭಾರತದ ಸೌಂದರ್ಯಕ್ಕೆ ಕನ್ನಡಿ ಹಿಡಿಯುವ ಛಾಯಾಚಿತ್ರಗಳ ಪ್ರದರ್ಶನದ ಉದ್ಘಾಟನೆ ಇದೇ ತಿಂಗಳ 13 ನೇ ಪಾರೀಖಿನಂದು ನಡೆಯಲಿದೆ. 22ನೇ ತಾರೀಖಿನವರೆಗೂ ನಡೆಯುವ ಈ ಪ್ರದರ್ಶನವನ್ನು ವಿಕ್ರಮ್ ಹಾಸ್ಪಿಟಲ್ಸ್ ನವರು ಪ್ರಾಯೋಜಿಸುತ್ತಿದ್ದಾರೆ

ಬೆಂಗಳೂರು ನಗರದ ಫೋಟೋಗ್ರಫಿ ಗ್ರೂಪ್ ಆದ ಥ್ಯಾಂಕ್ ಗಾಡ್ ಇಟ್ಸ್ ಸಾಟರ್ಡೆಯ (ಟಿ ಜಿ ಐ ಎಸ್ ) ಸದಸ್ಯರು ಸತತವಾಗಿ ನಾಲ್ಕನೇ ಬಾರಿ ಈ ವಾರ್ಷಿಕ ಪ್ರದರ್ಶನವನ್ನು ನಡೆಸಲು ಒಂದಾಗಿದ್ದಾರೆ. TGIS ನ ಬಹುತೇಕ ಸದಸ್ಯರು ಅಂತರರಾಷ್ಟ್ರೀಯ ಮಾನ್ಯತೆ ಪಡೆದಿರುವ ಛಾಯಾಗ್ರಾಹಕ ಆನಂದ್ ಶರಣ್ ಅವರು ನಡೆಸುತ್ತಿರುವ ಬೆಂಗಳೂರು ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಫೋಟೋಗ್ರಫಿ (BSOAP) ಯಲ್ಲಿ ಫೋಟೋಗ್ರಫಿ ತರಬೇತಿಯನ್ನು ಪಡೆದವರು. ನುರಿತ ಚಾಯಗ್ರಾಹಕರಾದ ಶಂಕರ್ ಸುಬ್ರಮಣಿಯಂ ಅವರು BSOAP ನಿಂದ ಹೊರ ಬಂದ ವಿದ್ಯಾರ್ಥಿಗಳಿಗೆ ಛಾಯಾಗ್ರಹಣದ ಅಭ್ಯಾಸವನ್ನು ಮುಂದುವರೆಸಲು ಅನುಕೂಲವಾಗಲೆಂದು TGIS ಅನ್ನು ಹುಟ್ಟು ಹಾಕಿದರು. ಈ ಗುಂಪಿನ ಹಿರಿಯ ಸದಸ್ಯರು ವನ್ಯಜೀವಿ, ಕಲೆ, ಸಂಸ್ಕೃತಿ, ವಾಸ್ತುಶಿಲ್ಪ, ಕಾಪು ಬಿಳುಪು, ಫ್ಯಾಶನ್, ಮ್ಯಾಕ್ರೋ ಮುಂತಾದ ವಿಷಯಗಳಲ್ಲಿ ಸದಸ್ಯರು ತಮ್ಮ ಕುಶಲತೆಯನ್ನು ಸಾಣೆ ಹಿಡಿಯಲು ಪ್ರೋತ್ಸಾಹಿಸಿ ಮಾರ್ಗದರ್ಶನವನ್ನು ನೀಡುತ್ತಾರೆ.

“TGIS ನಲ್ಲಿ 700ಕ್ಕೂ ಹೆಚ್ಚು ಸದಸ್ಯರಿದ್ದಾರೆ. ತಿಂಗಳಿಗೆ ಮೂರು ಬಾರಿ ಶನಿವಾರದಂದು ಒಂದುಗೂಡಿ ಫೋಟೋಗ್ರಫಿ ಅಭ್ಯಾಸ ನಡೆಸುತ್ತೇವೆ. ವರ್ಷಕ್ಕೊಮ್ಮೆ ಎಲ್ಲರೂ ಸಮಾಜ ಸೇವೆಗಾಗಿ ಕೈ ಜೋಡಿಸಿ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸುತ್ತೇವೆ. ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಫೋಟೋಗ್ರಫಿಯನ್ನು  ತಮ್ಮ ವೃತ್ತಿಯನ್ನಾಗಿ ಮಾಡಿಕೊಳ್ಳಲು ಪ್ರೋತ್ಸಾಹಿಸುತ್ತೇವೆ” ಎಂದು ಈ ಪ್ರದರ್ಶನದ ಮುಖ್ಯಸ್ಥರಾದ ಪ್ರಕಾಶ್ ಕಾಜ ರವರು ಹೇಳುತ್ತಾರೆ.

TGIS ಗುಂಪಿನಲ್ಲಿ ವಿದ್ಯಾರ್ಥಿಗಳು, ಉದ್ಯಮಿಗಳು, ವೃತ್ತಿನಿರತರು ಎಲ್ಲರೂ ಇದ್ದಾರೆ. ಅನುಭವಿ ಹಾಗು ಹವ್ಯಾಸಿ ಛಾಯಾಗ್ರಾಹಕರ ಈ ಗುಂಪು ಒಂದು ಒಳ್ಳೆಯ ಉದ್ದೇಶಕ್ಕಾಗಿ ಒಟ್ಟಾಗಿ ಸೇರಿ ಈ ಪ್ರದರ್ಶನವನ್ನು ನಡೆಸಿ ಅದರಿಂದ ಕಲೆ ಹಾಕಿದ ಮೊತ್ತವನ್ನು NGO ಗೆ ದಾನ ಕೊಡುತ್ತದೆ. ಈ ಬಾರಿ ಪ್ರದರ್ಶನದಿಂದ ಬಂದ ಹಣವನ್ನು MSSI (ಮಲ್ಟಿಪಲ್ ಸ್ಲೆರೋಸಿಸ್ ಸೊಸೈಟಿ ಆಫ್ ಇಂಡಿಯಾ) ಸಂಸ್ಥೆಗೆ ಕೊಡಲಾಗುವುದು.

“MSSI, ಬೆಂಗಳೂರು ಅಧ್ಯಾಯ, ಈ ಸಂಸ್ಥೆಗೆ ಸಹಾಯ ಮಾಡುವ ಅವಕಾಶ ದೊರೆತಿರುವುದು TGIS ನ ಸದಸ್ಯರಿಗೆ ಹೆಮ್ಮೆಯ ವಿಷಯ. ಮಲ್ಟಿಪಲ್ ಸ್ಲೆರೋಸಿಸ್ ಒಂದು ಮಾರಕ ರೋಗ. ಇದರ ಚಿಕಿತ್ಸೆ ಅತ್ಯಂತ ದುಬಾರಿ ಕೂಡ. ಈ ಬಾರಿಯ ಪ್ರದರ್ಶನದಿಂದ ಅಂದಾಜು 4 ಲಕ್ಷ ರೂಪಾಯಿ ಸಂಗ್ರಹಿಸುವ ಗುರಿ ಇದ್ದು ಈ ಮೊತ್ತವನ್ನು ಬಡ ರೋಗಿಗಳ ಚಿಕಿತ್ಸೆಗಾಗಿ ಬಳಸಲಾಗುವುದು” ಎಂದು ನೈನ್ ದಾಟ್ಸ್ ಕಾರ್ಪೊರೇಟ್ ಟ್ರೈನಿಂಗ್ ಸರ್ವಿಸಸ್ ನ ಡೈರೆಕ್ಟರ್ ಆಗಿರುವ ಶಂಕರ್ ಸುಬ್ರಮಣಿಯಂ ಹೇಳುತ್ತಾರೆ.