ಗೃಹ ಸಚಿವರ ಸಲಹೆಗಾರ, ನಿವೃತ್ತ ಐಪಿಎಸ್ ಅಧಿಕಾರಿ ಶ್ರೀ ಕೆಂಪಯ್ಯ ಅವರನ್ನು ಆದಾಯ ತೆರಿಗೆ ಅಧಿಕಾರಿಗಳು ತೀವ್ರವಿಚಾರಣೆಗೊಳಪಿಸುತ್ತಾರೆ. ಈ ಸಂಬಂಧ ಪತ್ರಕರ್ತರು ಶ್ರೀ ಕೆಂಪಯ್ಯ ಅವರನ್ನು ವಿಚಾರಿಸಿದಾಗಿ ಮಾಧ್ಯಮಗಳ ಮೇಲೆ ಹಿಗ್ಗಾ ಮುಗ್ಗಾವಾಗ್ಧಾಳಿ ನಡೆಸಿ ವಿನಾಕಾರಣ ನಿಂಧಿಸಿದ್ದಾರೆ.

ಮಾಧ್ಯಮದವರು ಇಲ್ಲಸಲ್ಲದ್ದನ್ನು ನಿರಂತರವಾಗಿ ಬಿತ್ತರಿಸುತ್ತೀರಿ, ಸುಳ್ಳು ಆರೋಪ ಮಾಡುತ್ತೀರಿ, ಎಂದು ಏರಿದ ಧ್ವನಿಯಲ್ಲಿ ಮಾತನಾಡಿಮಾಧ್ಯಮದವರು ಬ್ಲಾಕ್ ಮೇಲರ್ ಗಳು, ಚೀಟರ್ ಗಳು ಎಂದು ಆರೋಪಮಾಡಿರುವುದನ್ನು ಬೆಂಗಳೂರು ಪ್ರೆಸ್ ಕ್ಲಬ್  ತೀವ್ರವಾಗಿಖಂಡಿಸುತ್ತದೆ.

ಇಂಥ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಹೀಗೇ ಮುಂದುವರೆದರೆ ಪತ್ರಕರ್ತರು ಕಾರ್ಯ ನಿರ್ವಹಿಸುವುದೇ ದುಸ್ತರವಾಗುತ್ತದೆ. ಹಾಗೆಯೇಪ್ರಜಾಪ್ರಭುತ್ವದ 4ನೇ ಅಂಗವಾದ ಮಾಧ್ಯಮ ದುರ್ಬಲವಾಗಿ ನಾಶವಾಗಬೇಕಾಗುತ್ತದೆ. ಈ ಕೂಡಲೇ ಶ್ರೀ ಕೆಂಪಯ್ಯ  ಅವರು ಮಾಧ್ಯಮಗಳಕ್ಷಮೆ ಯಾಚಿಸಬೇಕು ಎಂದು ಪ್ರೆಸ್ ಕ್ಲಬ್  ಆಗ್ರಹಿಸುತ್ತದೆ.

(ಶ್ರೀಧರ. ಆರ್)               (ಶಿವಪ್ರಕಾಶ್. ಎಸ್)

ಅಧ್ಯಕ್ಷರು                        ಪ್ರಧಾನ ಕಾರ್ಯದರ್ಶಿ

Advertisements