god
ಬೆಂಗಳೂರು, ಮಾ.21- ಕುರುಬರ ಹಳ್ಳಿ ಮುಖ್ಯರಸ್ತೆ, ವೈಯಾಲಿಕಾವಲ್  ಬಡಾವಣೆ, ಬಾಲಸುಬ್ರಹ್ಮಣ್ಯಂ ಸೇವಾ ಸಮಿತಿ ವತಿಯಿಂದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆರಣದಲ್ಲಿ  ಬೃಹತ್ತಾಗಿ ನಿರ್ಮಿಸಿರುವ  ಶ್ರೀದುರ್ಗಾಪರಮೇಶ್ವರಿ ದೇವಿಯ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವನ್ನು ಇದೇ 25ರಂದು  ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.
ವಿಮಾನಗೋಪುರ, ಕುಂಭಾಭಿಷೇಕ, ಮಹಾಗಣಪತಿ, ಶ್ರಿ ಸುಬ್ರಹ್ಮಣ್ಯೇಶ್ವರ ಸ್ವಾಮಿ, ಶ್ರೀರಾಮ, ಶ್ರೀ ಆಂಜನೇಯ ಸ್ವಾಮಿಯ ದ್ವಾದಶ ವರ್ಷದ ಪುನರ್ ಅಷ್ಟಬಂಧನ ಕುಂಭಾಭಿಷೇಕ ಮಹೋತ್ಸವವನ್ನು ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ  ಬ್ರಹ್ಮಶ್ರೀ ಮಹರ್ಷಿ ಡಾ.ಆನಂದ ಗುರೂಜಿ, ಶ್ರೀ ವಿದ್ಯಾವಚಸ್ಪತಿ ಡಾ.ವಿಶ್ವಸಂತೋಷ ಭಾರತಿ, ಶ್ರೀಪಾದರು ಸಾನಿಧ್ಯ ವಹಿಸಲಿದ್ದಾರೆ.
25ರಂದು 301 ಸುಮಂಗಲಿಯರು ಪೂರ್ಣ ಕುಂಭಾಭಿಷೇಕದೊಂದಿಗೆ  ಧಾರ್ಮಿಕ ಕಾರ್ಯಕ್ರಮ ಆರಂಭವಾಗ ಲಿದ್ದು, ಕಟೀಲು ದುರ್ಗಾಪರಮೇಶ್ವರಿ ದೇವಿಯ ವಿಗ್ರಹವನ್ನು ಮಹರ್ಷಿ ಆನಂದ್ ಗುರೂಜಿಯವರು ಆನೆಯ ಮೇಲೆ ಮೆರವಣಿಗೆಯೊಂದಿಗೆ ಹೊತ್ತು ತರಲಿದ್ದಾರ.
ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ದೇವಾಲಯದ ಉದ್ಘಾಟನೆ ಮಾಡಲಿದ್ದು, ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ದುರ್ಗಾಪರಮೇಶ್ವರಿ ದೇವಾಲಯದ ಜ್ಯೋತಿ ಬೆಳಗಲಿದ್ದಾರೆ.
ಸಚಿವ ರಾಮಲಿಂಗಾರೆಡ್ಡಿ ಧ್ಯಾನ ಮಂದಿರ ಆರಂಭ ಮಾಡಲಿದ್ದು, ಸುಬ್ರ ಹ್ಮಣ್ಯ ಸೇವಾ ಸಮಿತಿ ಗೌರವಾಧ್ಯಕ್ಷರು ಹಾಗೂ ಶಾಸಕರಾದ ಕೆ.ಗೋಪಾಲಯ್ಯ ಅವರು ನಾಮಫಲಕ ಅನಾವರಣ ಮಾಡಲಿದ್ದಾರೆ. ಮೇಯರ್ ಮಂಜುನಾಥರೆಡ್ಡಿ, ಉಪ ಮೇಯರ್ ಹೇಮಲತಾ ಗೋಪಾಲಯ್ಯ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಎನ್.ಚಲುವ ರಾಯಸ್ವಾಮಿ, ಶಾಸಕರಾದ ಬಾಲಕೃಷ್ಣ, ಎಂ.ಡಿ.ಲಕ್ಷ್ಮೀನಾರಾಯಣ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬಿಬಿಎಂಪಿ ಸದಸ್ಯರಾದ ಎಂ.ಶಿವರಾಜು, ಕೇಶವಮೂರ್ತಿ, ಭದ್ರೇಗೌಡ, ಜಿ.ಕೃಷ್ಣಮೂರ್ತಿ, ಮಹದೇವು, ಗಂಗಮ್ಮ ರಾಜಣ್ಣ, ರಾಜೇಂದ್ರಕುಮಾರ್, ಸಂಪತ್‌ರಾಜ್, ಮಾಜಿ ಮೇಯರ್ ರಾಮಚಂದ್ರಪ್ಪ, ಹುಚ್ಚಪ್ಪ , ಮಾಜಿ ಉಪಮೇಯರ್ ಎಸ್.ಹರೀಶ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸೇವಾ ಸಮಿತಿ ಅಧ್ಯಕ್ಷ ಎಂ.ನಾಗರಾಜ್ ತಿಳಿಸಿದ್ದಾರೆ.
ಸುಮಾರು 1 ಎಕರೆ ಅನುಪಯುಕ್ತ ಜಾಗದಲ್ಲಿ ಅದ್ಭುತ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. 28 ಅಡಿ ಎತ್ತರದ ಶಿವನ ವಿಗ್ರಹ ಭಕ್ತರ ಕಣ್ಮನ ಸೆಳೆಯುತ್ತಿದೆ. ವೀರಾಂಜನೇಯ ವಿರಾಜ ಮಾನನಾಗಿದ್ದಾನೆ. ದುರ್ಗಾಪರಮೇಶ್ವರಿ ದೇವಾಲಯ ಉದ್ಘಾಟನೆಯಾಗುತ್ತಿದ್ದು, ಭಕ್ತಾದಿಗಳು ಧ್ಯಾನಾಸಕ್ತರಾಗಲು ಧ್ಯಾನಮಂದಿರ ಪ್ರಾರಂಭಿಸಲಾಗುತ್ತಿದೆ.  ಪ್ರತಿದಿನ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಭಕ್ತರು  ಎಂದಿನಂತೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.