IMG_6415

ನಗರದ ಸಿಟಿ ಮಾರ್ಕೆಟ್‌ನಿಂದ ಹೊರಟ ರ್‌್ಯಾಲಿ, ಅವೆನ್ಯೂ ರಸ್ತೆ ಮಾರ್ಗವಾಗಿ ಸಾಗಿ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಕೊನೆಗೊಂಡಿತು.
ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಸ್ಥಳಗಳಿಂದ ಆಭರಣ ಮಳಿಗೆಗಳ ಮಾಲೀಕರು, ವರ್ತಕರು, ಕೆಲಸಗಾರರು ಪಾಲ್ಗೊಂಡಿದ್ದರು. ಆಭರಣ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.  ‌ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಶೇ 1ರಷ್ಟು ಅಬಕಾರಿ ಸುಂಕವನ್ನು ಮರಳಿ ವಿಧಿಸುವುದಾಗಿ ಹೇಳಿರುವುದು ಚಿನ್ನಾಭರಣ ತಯಾರಿಕೆ ಮತ್ತು ಮಾರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ವೇಳೆ ಈ ನಿಯಮ ಜಾರಿಗೆ ಬಂದಿದ್ದೇ ಆದಲ್ಲಿ ಚಿನ್ನಾಭರಣ ಖರೀದಿಸುವ ಗ್ರಾಹಕರು ಹಾಗೂ ಮಾರಾಟಗಾರರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಉದಾಹರಣೆಗೆ, ಗ್ರಾಹಕರು ತಮ್ಮ ಬಳಿಯಿರುವ ಹಳೆಯ ಚಿನ್ನವನ್ನು ಬದಲಾಯಿಸಿ ಹೊಸ ಚಿನ್ನ ಖರೀಸುವ ವೇಳೆ ಪ್ರತಿ ಗ್ರಾಂಗೆ ₹350 ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ. ಅದೇರೀತಿ, ಆಭರಣ ಮಾಲೀಕರ ಬಳಿ ಈಗಿರುವ ಹಳೆಯ ಚಿನ್ನಕ್ಕೆ ಪ್ರತಿ ಗ್ರಾಂಗೆ ₹350 ಅನ್ನು ಸುಂಕವಾಗಿ ಕಟ್ಟಬೇಕಾಗುತ್ತದೆ.  ‘ದೇಶದಲ್ಲಿ 10 ಲಕ್ಷ ಆಭರಣ
ಮಾರಾಟಗಾರರಿದ್ದಾರೆ. ರಾಜ್ಯದಲ್ಲಿ 25 ಸಾವಿರ ಮಾರಾಟಗಾರರಿದ್ದು, ಈ ಉದ್ಯಮ ನಂಬಿಕೊಂಡು 3 ಲಕ್ಷ  ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಈ ನೀತಿಯಿಂದಾಗಿ ಅವರು ಬೀದಿಗೆ ಬರುವಂತಾಗಿದೆ’ ಎಂಬುವುದು ಆಭರಣ ಮಾರಾಟಗಾರರ ದೂರಾಗಿದೆ. ಚಿನ್ನಾಭರಣ ಉದ್ಯಮವನ್ನು ಅಬಕಾರಿ ಸುಂಕದ ವ್ಯಾಪ್ತಿಗೆ ಒಳಪಡಿಸಿರುವುದರಿಂದಾಗಿ ಗ್ರಾಹಕ ಮತ್ತು ಮಾಲೀಕ ಇಬ್ಬರಿಗೂ
ಹೊರೆಯಾಗಲಿದೆ.

IMG_6494

ಇದನ್ನು ರದ್ದು ಪಡಿಸಬೇಕೆಂದು ಒತ್ತಾಯಿಸುವ ಸಲುವಾಗಿಯೇ ಆಭರಣ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.‘ಪ್ರತಿಭಟನೆಯಲ್ಲಿ ತೊಡಗಿದ್ದ ಆಭರಣ ಮಾಲೀಕರು, ವರ್ತಕರು, ಅಕ್ಕಸಾಲಿಗಳು ಸೊಪ್ಪು, ಈರುಳ್ಳಿ, ಬದನೆಕಾಯಿ ತೂಕ ಮಾಡುವ ಮೂಲಕ ಚಿನ್ನಾಭರಣ ಉದ್ಯಮವನ್ನು ಅಬಕಾರಿ ಸುಂಕದ ವ್ಯಾಪ್ತಿಗೆ ಒಳಪಡಿಸಿರುವುದನ್ನು
ಸಾಂಕೇತಿಕವಾಗಿ ವಿರೋಧಿಸಿದರು. ಇದೇ ಸಂದರ್ಭದಲ್ಲಿ ಬೈಕ್‌ ರ್‌್ಯಾಲಿಯನ್ನು ನಡೆಸಲಾಯಿತು.  ಈ ವೇಳೆ ಅಬಕಾರಿ ಸುಂಕದ ವ್ಯಾಪ್ತಿಗೆ ಆಭರಣ ಉದ್ಯಮವನ್ನು ಸೇರಿಸಿರುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಒಂದು ಲಕ್ಷ ಸಹಿ ಸಂಗ್ರಹ ಮಾಡಿ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರಿಗೆ ಸಲ್ಲಿಸಲಾಯಿತು. ಅದನ್ನು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರಿಗೆ ನೀಡುವಂತೆ ಮನವಿ ಮಾಡಲಾಯಿತು. ಒಂದು ವೇಳೆ ಈ ನೀತಿಯನ್ನು ಕೈಬಿಡದೇ ಹೋದರೆ ದೆಹಲಿಯ ಜಂತರ್‌ ಮಂಥರ್‌ ಬಳಿ ಆಭರಣ ಉದ್ಯಮದಲ್ಲಿ ತೊಡಗಿಸಿಕೊಂಡವರೆಲ್ಲರೂ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಕರ್ನಾಟಕ ಆಭರಣ ಮಾರಾಟಗಾರರ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಎಚ್ಚರಿಕೆ ನೀಡಿದರು.

Advertisements