ಬೆಂಗಳೂರು: ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಜೆ.ಪಿ. ನಗರ ಲಯನ್ಸ್ ಕ್ಲಬ್, ಇವರ ಸಂಯುಕ್ತ ಆಶ್ರಯದಲ್ಲಿ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ  ಆರೋಗ್ಯ ತಪಾಸಣೆ ನಡೆಸಲಾಯಿತು.  ಇಸಿಜಿ. ಇಕೋ, ಕಣ್ಣಿನ ಹಾಗೂ  ಹೃದಯ ತಪಾಸಣೆಯನ್ನು 350 ಕ್ಕೂ ಹೆಚ್ಚಿನ ಕ್ಲಬ್ ಸದಸ್ಯರು ತಪಾಸಣೆ ಮಾಡಿಸಿಕೊಂಡರು.

IMG_20160124_150555

ಪ್ರೆಸ್ ಕ್ಲಬ್  ಆಧ್ಯಕ್ಷರಾದ ಆರ್. ಶ್ರೀಧರ, ಪದಾಧಿಕಾರಿಗಳಾದ ಶಿವಕುಮಾರ ಬೆಳ್ಳಿತಟ್ಟೆ, ಮಮ್ತಾಜ್ ಅಲೀಮ್ ಹಾಗೂ ಡಿಸ್ಟ್ರಿಕ್ಟ್ ಗೌರ್ನರ್ ಲಯನ್ ಪುರುಷೋತ್ತಮ್, ಜೆ.ಪಿ. ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾದ ಪ್ರೊ. ಕೆ.ಎಂ. ಮಾರಪ್ಪ, ಲಯನ್ ಎ.ಆರ್. ಚಂದ್ರಶೇಖರ್, ಸೂರ್ಯ ಕಲಾಚೌವ್ಹಾಣ್, ಡಿ.ಎಸ್. ಅಶ್ವಥ್, ಕಾರ್ಯ ಸಂಯೋಜಕರಾದ ಸುಶೀಲಾ ಜಿಂಗಾಡೆಯವರು ಪಾಲ್ಗೊಂಡಿದ್ದರು.

ನಮ್ಮ ಭಾರತದ ಪಶು ಸಂಪತ್ತನ್ನು ಕಾಪಾಡಲು ಗ್ರಾಮೀಣ ಪ್ರಾಂತ್ಯಗಳಲ್ಲಿ ಸಾವಿರಾರು ಪಶುಗಳ ಆರೋಗ್ಯ ತಪಾಸಣೆ, ವಯಸ್ಸಾದ ರಾಸುಗಳಿಗೆ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವುದರ ಜೊತೆಗೆ ರೈತರಿಗೆ ಪಶುಸಂಗೋಪನೆ ಮತ್ತು ಹೈನುಗಾರಿಕೆಯ ಬಗ್ಗೆ ತಜ್ಞರಿಂದ ಅರಿವು ಮೂಡಿಸುವ ಕಾರ್ಯಕ್ರಗಳನ್ನು ಜೆ.ಪಿ. ನಗರ ಲಯನ್ಸ್ ಕ್ಲಬ್ ಸಂಸ್ಥೆಯಿಂದ ನಡೆಸಿದೆ ಎಂದು ಸ್ಥಾಪಕ ಅಧ್ಯಕ್ಷರಾದ ಪ್ರೊ. ಕೆ.ಎಂ. ಮಾರಪ್ಪ ತಿಳಿಸಿದರು.

IMG-20160124-WA0000

ಬೆಂಗಳೂರು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಡೆದ ಎಲ್ಲಾ ರೀತಿಯ ಅರೋಗ್ಯ ತಪಾಸಣಾ ಶಿಬಿರದಲ್ಲಿ ಇದುವರಿಗೆ 45 ಸಾವಿರ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಪ್ರಯೋಜನ ಪಡೆದು ಕೊಂಡಿದ್ದಾರೆ ಎಂದು ವಿವರಿಸಿದರು.

IMG-20160124-WA0002

ರಕ್ತದಾನ ಶಿಬಿರಗಳನ್ನು ನಡೆಸಿ ಪ್ರತಿ ವರ್ಷ 3000 ಯುನಿಟ್ ರಕ್ತವನ್ನು ಶೇಖರಿಸಿ ಸರ್ಕಾರಿ  ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಕೊಡಲಾಗಿದೆ,  ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಶುಲ್ಕ, ವಿಕಲಚೇತನರಿಗೆ ಕೃತಕ ಕಾಲುಗಳ ಜೋಡಣಿ, ಗಾಲಿ ಕುರ್ಚಿಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ವಿವರಿಸಿದರು.

1997 ರಲ್ಲಿ ಪ್ರಾರಂಭವಾದಾಗ 32 ಸದಸ್ಯರಿದ್ದ ಜೆ.ಪಿ. ನಗರ ಲಯನ್ಸ್ ಸಂಸ್ಥೆಗೆ ಈಗ 69 ಸದಸ್ಯರನ್ನು ಒಳಗೊಂಡು ಸತತವಾಗಿ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ ಎಂದು ಕಾರ್ಯ ಸಂಯೋಜಕರಾದ ಸುಶೀಲಾ ಜಿಂಗಾಡೆ ತಿಳಿಸಿದರು.

Advertisements