NOsign2014
waste_2386249g
ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿ ವ್ಯಾಪ್ತಿಗೆ ಸೇರಿದ ಕನ್ನಹಳ್ಳಿ  ಮತ್ತು ಸೀಗೆ ಹಳ್ಳಿ  ಗ್ರಾಮಗಳಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಡಿಸೆಂಬರ್ ೨೧ ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಅಲ್ಲಿಯ ಕಸ ವಿಲೇವಾರಿ ಘಟಕ ವಿರೋಧಿ ಹೋರಾಟ ಸಮಿತಿಯ ಚನ್ನಪ್ಪರವರು ತಿಳಿಸಿದ್ದಾರೆ. ಈ ಘಟಕ ಸುಮಾರು ೧೦ ವರ್ಷಗಳಿಂದ ಬಿಬಿಎಂಪಿ ಕಸ ವಿಲೇವಾರಿ ಮಾಡಲಾಗುತ್ತಿದೆ.  ಇದರಿಂದಾಗಿ ಘಟಕದಿಂದ ಹೊರಸೂಸುವ ದುರ್ವಾಸನೆಯಿಂದಾಗಿ ಸ್ಥಳೀಯ ಜನರಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.

ಸುತ್ತಮುತ್ತ ಹೆಚ್ಚಾಗಿ ಶಾಲಾ ಕಾಲೇಜುಗಳು, ಸಂಸ್ಥೆಗಳು ಸೇರಿದಂತೆ ಪ್ರಮುಖ ಬಸ್ ನಿಲ್ದಾಣವಿದೆ.  ಇಲ್ಲಿನ ದುರ್ವಾಸನೆಯಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಲ್ಬಣವಾಗಿದೆ ಎಂದು ತಿಳಿಸಿದ ಅವರು, ಈ ಕುರಿತು ಕಸ ವಿಲೇವಾರಿ ಮಾಡದಂತೆ ಇಲ್ಲಿನ ಜನರು ವಿರೋಧಿಸಿದ್ದಾಗ ಕೆಲ ದಿನಗಳ ಕಾಲ ಘಟಕವನ್ನು ಮುಚ್ಚಲಾಗುತ್ತು.  ಆದರೆ ಕಳೆದ ಆರು ತಿಂಗಳಿಂದ ರಾತ್ರಿ ಸಮಯದಲ್ಲಿ ಪೋಲಿಸರ ಬೆಂಗಾವಲಿನಲ್ಲಿ ಸಮಾರು ೧೦೦ ಲಾರಿಗಳಿಂದ ಕಸ ವಿಲೇವಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸರಕಾರಕ್ಕೆ ಈ ಅನ್ಯಾಯದ ಕುರಿತು ಹಲವಾರು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ.  ಹೀಗಾಗಿ ಸರಕಾರದ ಗಮನವನ್ನು ಸೆಳೆಯಲು ಡಿಸೆಂಬರ್ ೨೧ ರಂದು ಪ್ರತಿಭಟನೆಯನ್ನು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.  ಸಮಿತಿಯ ಸದಸ್ಯರು ಹಾಗೂ ವ್ಯಾಪ್ತಿ ಹಲವಾರು ಗ್ರಾಮಸ್ಥರು ಹಾಜರಿದ್ದರು.

http://www.bangaloremirror.com/bangalore/others/Angry-villagers-vandalise-Kannahalli-compost-plant/articleshow/49129592.cms

Advertisements