unnamed (2)

Satsang Vihar, Bengaluru cordially invites you along with your family, friends and relatives on the auspicious occasion of The celebration of 1st Anniversary of Sacred Inauguration of Satsang Sri Mandir of YUGA-PURUSHOTTAMA PARAM PREMAMAYA SREE SREE THAKUR ANUKULCHANDRA in Bengaluru on 13th December 2015, Sunday

‘ಜೀವನ ಮತ್ತು ವರ್ಧನ’ ಎಂಬ ಮೂಲಮಂತ್ರದೊಂದಿಗೆ ಮನುಷ್ಯನ ಜೀವನವನ್ನು ಆನಂದ ಪಥದತ್ತ ಸಾಗಲು ನೆರವಾಗುವಂತೆ ಧಾರ್ಮಿಕ ,ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಭಾರತ ಮತ್ತು ವಿಶ್ವದಾದ್ಯಂತ ಸುಮಾರು 5000 ಕೇಂದ್ರಗಳಲ್ಲಿ ಸತ್ಸಂಗ ವಿಹಾರವು ಕಾರ್ಯನಿರತವಾಗಿದೆ.

ಜಾರ್ಖಂಡ್ ರಾಜ್ಯದ ದೇವಘರ್‍ ನಲ್ಲಿ ಸತ್ಸಂಗ ವಿಹಾರದ ಪ್ರಧಾನ ಕೇಂದ್ರವಿದ್ದು ಅದರ ಸಂಸ್ಥಾಪಕರಾದ ಶ್ರೀ ಶ್ರೀ ಠಾಕೂರ ಅನುಕುಳಚಂದ್ರರು ತಮ್ಮ ದಿವ್ಯ ಪ್ರೇಮ ಮತ್ತು ಅಮೃತ ಸಂದೇಶದಿಂದ ಮೃತ್ಯುಗಾಮಿ, ವೃತ್ತಿ ಪರವಶನಾದ ಮನುಷ್ಯನಿಗೆ ಜೀವನ-ವರ್ಧನ ಹಾಗೂ ಪರಮಾನಂದ ಪಥವನ್ನು ತೋರಿಸಿಕೊಟ್ಟಿದ್ದಾರೆ.

ಶ್ರೀ ಶ್ರೀ ಠಾಕೂರ ಅನುಕುಳಚಂದ್ರರು ಅವರ ಚುಂಬಕಿಯ ಆಕರ್ಷಣ, ದಿವ್ಯಪ್ರಭೆ, ಸಹಜತೆ, ಸರಳತೆ ಹಾಗೂ ಅಸಾಧಾರಣ ವ್ಯಕ್ತಿತ್ವಗಳಿಂದ ಕೋಟಿಗಟ್ಟಲೆ ಜನರನ್ನು ತಮ್ಮೆಡೆಗೆ ಆಕರ್ಷಿಸುತ್ತಿದ್ದಾರೆ. ಯಾವುದೇ ಜಾತಿ, ವರ್ಣ, ಸಂಪ್ರದಾಯ ಅಥವಾ ಧರ್ಮಕ್ಕೆ ಸೇರಿದವರಾಗಿದ್ದರೂ ಶ್ರೀಗಳ ಮಾರ್ಗವನ್ನು ಅನುಸರಿಸುತ್ತಾ ತಮ್ಮ ಜೀವನದ ಸಮಸ್ತ ಸಮಸ್ಯೆಗಳಿಗೆ ಸಮಾಧಾನವನ್ನು ಕಂಡುಕೊಳ್ಳುತ್ತಿದ್ದಾರೆ.

ಶ್ರೀ ಶ್ರೀ ಠಾಕೂರ ಅನುಕುಳಚಂದ್ರರು ಯಾವಾಗಲೂ ಪ್ರಾಚೀನ ಹಾಗೂ ಸಾಂಪ್ರದಾಯಿಕ ಜ್ಞಾನವನ್ನು ನಿರಾಕರಿಸಿಲ್ಲ. ಆದರೆ ಮಧುರ-ಮಿಶ್ರದಲ್ಲಿ ಅಲ್ಲಗಳೆಯಲಾಗದ ಕಾರಣ ಅವುಗಳನ್ನು ವಾಹಕ ಮಾಡುವ ಆಳವಾದ ವೈಜ್ಞಾನಿಕ ಅಂಶಗಳ ಜೊತೆ ಪ್ರಸ್ತುತ ಪಡಿಸಿದ್ದಾರೆ.

ಬೆಂಗಳೂರಿನ ಕೃಷ್ಣರಾಜ ಪುರಂ ಹತ್ತಿರದ ಮೇಡಹಳ್ಳಿಯ ಕರುಣಶ್ರೀ ಲೇಔಟ್‍ನಲ್ಲಿರುವ ಸತ್ಸಂಗ ವಿಹಾರ ಕೇಂದ್ರವು  ಶ್ರೀ ಶ್ರೀ ಠಾಕೂರ ಅನುಕುಳಚಂದ್ರರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಾ ಸಾವಿರಾರು ಸದಸ್ಯರೊಂದಿಗೆ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಕರ್ನಾಟಕದಲ್ಲಿ ಸತ್ಸಂಗ ವಿಹಾರದ ಪ್ರಪ್ರಥಮ ಸತ್ಸಂಗ ಶ್ರೀ ಮಂದಿರವನ್ನು ಮೇಡಿಹಳ್ಳಿಯಲ್ಲಿ ನಿರ್ಮಿಸಲಾಗಿದ್ದು ಅದರ ಪ್ರಥಮ ವಾರ್ಷಿಕೋತ್ಸವವನ್ನು ದಿನಾಂಕ 13 ಡಿಸೆಂಬರ್ 2015ರಂದು ಆಚರಿಸಲಾಗುತ್ತಿದೆ.

ಇದರ ಅಂಗವಾಗಿ ಬÉಳಗಿನಿಂದ ಸಂಜೆಯವರೆಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂಜಾನೆ ವೇದ ಸಮಂಗಲಿಕಿ ಮತ್ತು ಶಹನಾಯಿ, ಬೆಳಗ್ಗೆ 5-45ಕ್ಕೆ ಉಷಾ ಕೀರ್ತನೆ, 6-35ಕ್ಕೆ ಸಾಮೂಹಿಕ ಪ್ರಾರ್ಥನೆ ಹಾಗೂ ಪ್ರಣಾಮ (ವಿವಿಧ ಭಾಷೆಗಳಲ್ಲಿ ಶ್ರೀ ಶ್ರೀ ಠಾಕೂರರ ದೈವಿಕ ಸಂದೇಶಗಳ ಪಠನೆ), 8-30ಕ್ಕೆ ಸಂಗೀತಾಂಜಲಿ ಭಜನೆ, 9-30ಕ್ಕೆ ನಗರ ಸಂಕೀರ್ತನೆ(ಮೆರವಣಿಗೆ), 11ಗಂಟೆಗೆ ಸಾಮಾನ್ಯಸಭೆ, ಮಧ್ಯಾಹ್ನ 2-30ರ ನಂತರ ಆನಂದ ಬಜಾರ್ ಅನ್ನದಾನ ಪ್ರಸಾದ ಸೇವನೆ, 3-30ಕ್ಕೆ ಮಾತೃ ಸಮ್ಮೇಳನ, ಸಂಜೆ 5-45ಕ್ಕೆ ಸಾಮೂಹಿಕ ಸಂಧ್ಯಾಕಾಲ ಪ್ರಾರ್ಥನೆ, 7ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು, ರಾತ್ರಿ 8ಗಂಟೆಗೆ ಆನಂದಬಜಾರ್ ಅನ್ನದಾನ ಪ್ರಸಾದ ಸೇವನೆ ನಡೆಯಲಿವೆ.

ಈ ಕಾರ್ಯಕ್ರಮಗಳಿಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಶ್ರೀ ಶ್ರೀ ಠಾಕೂರರ ಭಗದ್ಭಕ್ತರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಶ್ರೀ ಮಂದಿರದ ಸಹಪ್ರತಿ ರುತ್ವಿಕ್ ಅಜಯ್ ಕುಮಾರ್ ಪಾತ್ರ ವಿನಂತಿಸಿಕೊಂಡಿದ್ದಾರೆ.

Venue: Satsang Vihar, Karnasree Layout, Medahalli, Bengaluru – 560 049